ಬಸವ ಧರ್ಮ ಪೀಠBasava Dharma Peeta
ಮೆನುಮುಚ್ಚಿ
ಪ್ರಸಾರಕರ ನೋಂದಣಿ+91 95919 38666

ಬಸವ ಧರ್ಮ ಪೀಠಕೂಡಲಸಂಗಮ

“ಬಸವ ಪೀಠವು ಎದ್ದು ಒಸೆದು ನಾಣ್ಯವು ಹುಟ್ಟಿ,ಬಸವನಾ ಮುದ್ರೆ ಮೆರೆದಾವು ಧರೆಯವಗೆ;ವಶವಾಗದಿಹುದೆ ಸರ್ವಜ್ಞ?”

1992ರಲ್ಲಿ ಕೂಡಲಸಂಗಮದಲ್ಲಿ ಸ್ಥಾಪಿತವಾದ ಬಸವ ಧರ್ಮ ಪೀಠವು ಬಸವ ತತ್ತ್ವ ಮತ್ತು ಸಮಾನತೆ ಸಾರುವ ಉದ್ದೇಶ ಹೊಂದಿದೆ. ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಹಾಗೂ ಮಾತೆ ಗಂಗಾದೇವಿಯವರು ಪೀಠಾಧೀಶರಾಗಿ ಈ ಪರಂಪರೆಯನ್ನು ನಿರಂತರವಾಗಿ ಮುನ್ನಡೆಸುತ್ತಿದ್ದಾರೆ.

ಕೂಡಲಸಂಗಮದ ಮಹಾಮನೆಯ ಗಣಲಿಂಗ ಮಂಟಪ

ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು.ಒಳಗೂ ಕಲ್ಯಾಣ ಹೊರಗೂ ಕಲ್ಯಾಣ.

ಕಲ್ಯಾಣ ಪರ್ವವು ಜಾತಿ, ಮತ, ಪಂಥ ಭೇದವಿಲ್ಲದೆ ಸರ್ವರನ್ನೂ ಬೆಸೆಯುವ ಧಾರ್ಮಿಕ ಸಮ್ಮೇಳನ. ವೈವಿಧ್ಯಮಯ ಕಾರ್ಯಕ್ರಮಗಳು, ಶೂನ್ಯ ಪೀಠ ಹಾಗೂ 108 ಅಡಿ ಬಸವ ಪುತ್ಥಳಿಯ ಮೂಲಕ 12ನೇ ಶತಮಾನದ ಶರಣ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ತಲುಪಿಸುತ್ತಿದೆ

ಬಸವಕಲ್ಯಾಣದ 108 ಅಡಿ ಎತ್ತರದ ಬಸವಣ್ಣನವರ ಪುತ್ಥಳಿ

ನೋಟದ ಭಕ್ತಿ ಬಸವನಿಂದಾಯಿತ್ತು,ಕೂಟದ ಜ್ಞಾನ ಬಸವನಿಂದಾಯಿತ್ತು.

ಬೆಂಗಳೂರಿನ ಕುಂಬಳಗೋಡಿನಲ್ಲಿರುವ "ಬಸವ ಗಂಗೋತ್ರಿ ಆಶ್ರಮ"ವನ್ನು ವಿಶ್ವಕಲ್ಯಾಣ ಮಿಷನ್ ನಡೆಸುತ್ತಿದೆ. ಇಲ್ಲಿ ಬಸವ ತತ್ವ ಶಿಬಿರ ಹಾಗೂ ಬಸವೋತ್ಸವಗಳು ನಡೆಯುತ್ತಿದ್ದು, ಸಾರ್ವಜನಿಕರು ಅನುಕೂಲವಾಗುವಂತೆ ಅನಾಥಾಲಯ, ವೃದ್ಧಾಶ್ರಮಗಳನ್ನು ನಡೆಸಲಾಗುತ್ತಿದೆ. 112 ಅಡಿ ಭವ್ಯವಾದ ಬಸವಣ್ಣನವರ ಮೂರ್ತಿ ನಿರ್ಮಾಣ ಹಂತದಲ್ಲಿದೆ.

ನಿರ್ಮಾಣ ಹಂತದಲ್ಲಿರುವ 112 ಅಡಿ ಬಸವಣ್ಣನವರ ಮೂರ್ತಿಯ ಚಿತ್ರ

ಲಿಂಗಾಯತ ಧರ್ಮದ ಸಪ್ತಗಣಾಧೀಶರು

ಸಕಲ ಜೀವಾತ್ಮರಿಗೆ ಲೇಸನು ಬಯಸಿದ ಕೂಡಲಸಂಗನ ಶರಣರೇ ಕುಲಜರು

ಲಿಂಗಾಯತ ಧರ್ಮದ ಸಪ್ತಗಣಾಧೀಶರ ಚಿತ್ರ

ಮುಂಬರುವ ಕಾರ್ಯಕ್ರಮಗಳು

ಕಾರ್ಯಕ್ರಮ ಮತ್ತು ನೋಂದಣಿಯ ವಿವರಗಳಿಗಾಗಿ ಕಚೇರಿಗೆ ಕರೆ ಮಾಡಿ.

+91 95919 38666
  • 24, 25, 26 Octoberಬಸವಕಲ್ಯಾಣ

    ಕಲ್ಯಾಣ ಪರ್ವ

    ಬಸವ ಧರ್ಮ ಪೀಠದಿಂದ ಬಸವಕಲ್ಯಾಣದಲ್ಲಿ ಆಯೋಜಿಸಲಾಗುವ ವಿಶೇಷ ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಉತ್ಸವವೇ ಕಲ್ಯಾಣ ಪರ್ವ . 12ನೇ ಶತಮಾನದ ಶರಣರ ಸಮಾನತೆಯ ತತ್ವಗಳನ್ನು ಸಾರಲು ಪೂಜ್ಯ ಮಾತೆ ಮಹಾದೇವಿಯವರು 2002 ರಲ್ಲಿ ಪ್ರಾರಂಭಿಸಿದ 'ಕಲ್ಯಾಣ ಪರ್ವ' ಸಮ್ಮೇಳನಕ್ಕೆ ಜಾತಿ-ಮತ ಭೇದವಿಲ್ಲದೆ ನಾಡಿನೆಲ್ಲೆಡೆಯ ಬಸವ ಅನುಯಾಯಿಗಳಿಗೆ ಪಾಲ್ಗೊಳ್ಳುತ್ತಾರೆ

  • 12, 13, 14 Januaryಕೂಡಲಸಂಗಮ

    ಶರಣಮೇಳ

    1988ರಲ್ಲಿ ಕೂಡಲಸಂಗಮದಲ್ಲಿ ಶರಣಮೇಳ ಪ್ರಾರಂಭವಾಯಿತು. ಪೂಜ್ಯ ಲಿಂಗಾನಂದ ಸ್ವಾಮೀಜಿ, ಪೂಜ್ಯ ಮಾತೆ ಮಹಾದೇವಿ ಮತ್ತು ಪೂಜ್ಯ ಮಾತೆ ಗಂಗಾದೇವಿಯವರು ಯಶಸ್ವಿಯಾಗಿ ನಡೆಸುಕೊಂಡು ಬಂದಿದ್ದಾರೆ. ಜನವರಿ 14ರ ಬಸವ ಕ್ರಾಂತಿ ದಿನದಂದು ಧ್ವಜಾರೋಹಣ, ವಚನ ಪಠಣ, ಸಾಮೂಹಿಕ ಇಷ್ಟಲಿಂಗಾರ್ಚನೆ, ಸಮುದಾಯ ಪ್ರಾರ್ಥನೆ ಆಚರಿಸಲಾಗುತ್ತದೆ. ಈ ಸಮಾವೇಶವು ಜಾತಿ, ಮತ, ಪಂಥ ಬೇದವಿಲ್ಲದೆ ಬಸವ ಅನುಯಾಯಿಗಳ ಪವಿತ್ರ ಸಮಾವೇಶವಾಗಿದೆ

ಎಲ್ಲಾ ಕಾರ್ಯಕ್ರಮಗಳು

ಲಿಂಗಾಯತ ಧರ್ಮ ಸಂಸ್ಥಾಪಕರು, ಗುರು ಬಸವಣ್ಣನವರು

ಶರಣರ ನಡುವೆ ಇಷ್ಟಲಿಂಗ ಹಿಡಿದು ಕುಳಿತ ಗುರು ಬಸವಣ್ಣನವರ ಚಿತ್ರ — ಕಾಯಕವೇ ಕೈಲಾಸ

ಕೂಡಲಸಂಗಮವು ಬಸವಣ್ಣನವರ ವಿದ್ಯಾಭೂಮಿ ಮತ್ತು ಐಕ್ಯಕ್ಷೇತ್ರವಾಗಿದ್ದು, ಲಿಂಗಾಯತರಿಗೆ ಅತ್ಯಂತ ಪವಿತ್ರ ಧರ್ಮಕ್ಷೇತ್ರವಾಗಿದೆ. ಈ ಪುಣ್ಯಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಲಿಂ. ಲಿಂಗಾನಂದ ಮಹಾಸ್ವಾಮಿಗಳು ಮತ್ತು ಲಿಂ. ಮಾತೆ ಮಹಾದೇವಿಯವರ ಮಾರ್ಗದರ್ಶನದಲ್ಲಿ 'ಬಸವ ಧರ್ಮ ಪೀಠ ಟ್ರಸ್ಟ್' ಸ್ಥಾಪಿಸಲಾಯಿತು. ಪ್ರಸ್ತುತ ಟ್ರಸ್ಟ್ 26 ಎಕರೆ ಜಮೀನಿನಲ್ಲಿ 'ಮಹಾಮನೆ' ಎಂಬ ಬೃಹತ್ ಮಠವನ್ನು ನಿರ್ಮಿಸಿದೆ. ಇದರಲ್ಲಿ ವಿಶೇಷ ಶಕ್ತಿಕೇಂದ್ರವಾದ ಗಣಲಿಂಗ ಮಂಟಪ, ಬಸವ ಧ್ಯಾನ ಮಂಟಪ, ಶರಣಾಲಯ ಹಾಗೂ 20 ಭವ್ಯ ಶರಣರ ಮಂಟಪಗಳಿವೆ. ಭಕ್ತರು ತಮ್ಮ ಜೀವನದ ಶುಭ ಸಂದರ್ಭಗಳಲ್ಲಿ ಇಲ್ಲಿಗೆ ಭೇಟಿ ನೀಡಿ, ಪೂಜೆ ಮತ್ತು ದಾಸೋಹ ನೆರವೇರಿಸಿ ಧರ್ಮಗುರುವಿಗೆ ಕೃತಜ್ಞತೆ ಸಲ್ಲಿಸಲು ಆಹ್ವಾನಿಸಲಾಗಿದೆ.

ಪೂರ್ಣ ಇತಿಹಾಸ ಓದಿ

ಮೌಲ್ಯಗಳು

  • ಕಾಯಕಪ್ರಾಮಾಣಿಕವಾಗಿ ದುಡಿಯುವುದು ಹಾಗೂ ಅದರಲ್ಲಿ ದೈವಿಕತೆಯನ್ನು ಕಾಣುವುದು
  • ದಾಸೋಹಕಾಯಕದಿಂದ ಬಂದುದರಲ್ಲಿ ತಮಗೆ ಬೇಕಾದುದನ್ನು ಇಟ್ಟುಕೊಂಡು, ಉಳಿದದ್ದನ್ನು ಸಮಾಜದ ಕಲ್ಯಾಣಕ್ಕಾಗಿ ಮತ್ತು ಕಷ್ಟದಲ್ಲಿರುವವರಿಗೆ ನಿಸ್ವಾರ್ಥವಾಗಿ ಹಂಚುವುದೇ ದಾಸೋಹ
  • ಸಮಾನತೆಹುಟ್ಟಿನಿಂದ ಎಲ್ಲರೂ ಸಮಾನರು ಎಂದು ಸಾರಿ, ಮೇಲು-ಕೀಳು ಎಂಬ ಭೇದಭಾವವನ್ನು ತೊಡೆದು ಹಾಕುವುದು

ಬಸವ ಧರ್ಮ ಪೀಠದ ಮಹಾ ಜಗದ್ಗುರುಗಳು

ಜೀವನಚರಿತ್ರೆ ಓದಲು ಹೆಸರನ್ನು ಆರಿಸಿ.

  1. ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಭಾವಚಿತ್ರ
  2. ಪೂಜ್ಯ ಡಾ. ಮಾತೆ ಮಹಾದೇವಿಯವರ ಭಾವಚಿತ್ರ
  3. ಪೂಜ್ಯ ಡಾ. ಮಾತೆ ಗಂಗಾದೇವಿಯವರ ಭಾವಚಿತ್ರ

ನಮ್ಮ ಪೀಠಗಳು

  1. ಕೂಡಲಸಂಗಮದ ಗಣಲಿಂಗ ಮಂಟಪ

    ಬಸವ ಧರ್ಮ ಪೀಠ (ರಿ)

    ಮಹದೇಶ್ವರ ಸ್ವಾಮೀಜಿ

    ಮಹಾಮನೆ ಸಂಕೀರ್ಣಕೂಡಲ ಸಂಗಮ – 587141ತಾ. ಹುಣಸಗಿ, ಜಿಲ್ಲೆ ಬಿಜಾಪುರ, ಕರ್ನಾಟಕ
  2. ಜಗನ್ಮಾತೆ ಅಕ್ಕಮಹಾದೇವಿಯವರ ಚಿತ್ರ
    ಧಾರವಾಡ

    ಅಕ್ಕಮಹಾದೇವಿ ಅನುಭಾವ ಪೀಠ

    Jaganmata Akkamahadevi Aashrama Ulavi Road, Railway Gate, Dharwad – 580003
  3. ಅಲ್ಲಮಪ್ರಭುದೇವರ ಚಿತ್ರ
    ಬಸವಕಲ್ಯಾಣ

    ಅಲ್ಲಮಪ್ರಭು ಶೂನ್ಯ ಪೀಠ

    Basava Dharma Peeta, Mahamane Mahamatha, Basava Kalyana Main Road, Basava Kalyana – 585327 Dist. Bidar
  4. ಚೆನ್ನಬಸವಣ್ಣನವರ ಚಿತ್ರ
    ಬೆಂಗಳೂರು

    ಚಿನ್ಮಯ ಜ್ಞಾನಿ ಚೆನ್ನಬಸವೇಶ್ವರ ಜ್ಞಾನಪೀಠ

    Basava Gangitri Ashrama Kumbalagodu, Bengaluru
  5. ಅಲ್ಲಮಪ್ರಭುದೇವರ ಚಿತ್ರ
    ಅಲ್ಲಮಗಿರಿ, ಮಹಾರಾಷ್ಟ್ರ

    ಶೂನ್ಯ ಪೀಠಾಧೀಶ ಅಲ್ಲಮಪ್ರಭು ಯೋಗ ಪೀಠ

    Allamaprabhu Yoga Peeta Allamagiri, Alathe Hathkanangale, Dist. Kolhapur.
  6. ಅಕ್ಕ ನಾಗಲಾಂಬಿಕೆಯವರ ಚಿತ್ರ
    ಉಳವಿ

    ವೀರ ಮಾತೇ ಅಕ್ಕ ನಾಗಲಾಂಬಿಕೆ ಅನುಭಾವ ಪೀಠ

    Veera Mate Akka Nagalambike Anubhava Peeta, Ulavi, Dharwad – Dist
ಬೆಂಗಳೂರಿನ ರಾಜಾಜಿನಗರದಲ್ಲಿರುವ ಬಸವ ಮಂಟಪ ಕಟ್ಟಡ
ಶಾಖೆ

ಬಸವ ಮಂಟಪ

Block 2, 27, 20th Main Rd, 2nd Block, Rajajinagar, Bengaluru, Karnataka 560010
ದಾರಿ ತೋರಿಸಿ

ವಿಡಿಯೊಗಳು

Rashtreeya Basava Dala

  • Statue of Divinity Drone Shoot | Vishwaguru Basavanna's 112 feet Height Statue | VishwaKalynaMission

    Statue of Divinity Drone Shoot | Vishwaguru Basavanna's 112 feet Height Statue | VishwaKalynaMission

  • 36th Sharana Mela | Sri Basavayogi Swamiji | Basava Dharma Peetha | Kudalasangama | ೩೬ನೇ ಶರಣ ಮೇಳ |

    36th Sharana Mela | Sri Basavayogi Swamiji | Basava Dharma Peetha | Kudalasangama | ೩೬ನೇ ಶರಣ ಮೇಳ |

  • 36th SharanaMela | Basava Dharma Peetha | Kudalasangama | Tejaswini AnantKumar | ೩೬ನೇ ಶರಣ ಮೇಳ

    36th SharanaMela | Basava Dharma Peetha | Kudalasangama | Tejaswini AnantKumar | ೩೬ನೇ ಶರಣ ಮೇಳ

ಎಲ್ಲಾ ವಿಡಿಯೊಗಳು

ಪ್ರಸಾರಕರು ಮತ್ತು ಸಹಕಾರ

ಪ್ರಸಾರಕರಾಗುವುದು ಬಸವ ಧರ್ಮ ಪೀಠದ ಕಾರ್ಯದಲ್ಲಿ ಭಾಗವಹಿಸುವ ಆಹ್ವಾನ. ಅರ್ಜಿ ಸಲ್ಲಿಸುವ ವಿಧಾನವನ್ನು ಪ್ರಸಾರಕರ ಪುಟದಲ್ಲಿ ನೋಡಿ.

ಈಗಾಗಲೇ ಪ್ರಸಾರಕರಾಗಿದ್ದೀರಾ? ಪ್ರಸಾರಕರ ಪುಟದಲ್ಲಿ ಗುರುತಿನ ಚೀಟಿ ಡೌನ್‌ಲೋಡ್ ಮಾಡಿ

ಧನ ಸಹಾಯಕ್ಕಾಗಿ ಮನವಿ

ಪ್ರಸಾರಕರಾಗದೆಯೂ ಬಸವ ಧರ್ಮ ಪೀಠಕ್ಕೆ ಧನ ಸಹಾಯ ಮಾಡಬಹುದು. ಇತರ ಕೊಡುಗೆಗಳ ಬಗ್ಗೆ ತಿಳಿಯಲು ಕಚೇರಿಗೆ ಕರೆ ಮಾಡಿ.

+91 95919 38666

ಕಲ್ಯಾಣ ಕಿರಣ · ಮಾಸಿಕ ಪತ್ರಿಕೆ

ಪೀಠದ ಮಾಸಿಕ ಪತ್ರಿಕೆ ಕಲ್ಯಾಣ ಕಿರಣಕ್ಕೆ ಚಂದಾದಾರರಾಗಿ — 1 ವರ್ಷ ₹200, 6 ವರ್ಷ ₹1,000, ಜೀವಮಾನ ₹3,000.