ಷಡಾಚಾರ
ಲಿಂಗಾಯತ ಧರ್ಮದಲ್ಲಿರುವ ಸಮಾಜೋಧಾರ್ಮಿಕ ಪರಿಕಲ್ಪನೆಗಳು ಮತ್ತು ಆಚರಣೆಗಳು
The English version of this page is not ready yet. The Kannada text is shown below.
ಬಸವಾಚಾರ
ಕಾರಣಿಕ ಪುರುಷರಾದ ಬಸವಣ್ಣನವರನ್ನು ಧರ್ಮಗುರು, ಆದಿ ಪ್ರಮಥರೆಂದು ನಂಬಿ ಏಕಗುರು ನಿಷ್ಠೆ ಹೊಂದುವುದು
ಲಿಂಗಾಚಾರ
ಧರ್ಮಗುರು ಬಸವಣ್ಣನವರು ತಿಳಿಸಿಕೊಟ್ಟಂತೆ ದೇವರು ಒಬ್ಬನೇ ಎಂದು ದೃಢವಾಗಿ ನಂಬಿ, ಅವರು ರೂಪಿಸಿಕೊಟ್ಟ ಇಷ್ಟಲಿಂಗವನ್ನು ಧರಿಸಿ, ಅದರ ಮೂಲಕವೇ ಸೃಷ್ಟಿಕರ್ತನನ್ನು ಆರಾಧಿಸುವುದು. ಅನ್ಯದೈವ ಉಪಾಸನೆ ತೊರೆಯುವುದು
ಸದಾಚಾರ
ಆರ್ಥಿಕ ಸಮಾನತೆಯನ್ನು ಸಮಾಜದಲ್ಲಿ ತರಲೋಸುಗ ವಿಶ್ವಗುರು ಬಸವಣ್ಣನವರು ಬೋಧಿಸಿದ ಕಾಯಕ-ದಾಸೋಹ-ಪ್ರಸಾದ ಸಂಪುಟ
ಶಿವಾಚಾರ
ದೇವನೊಬ್ಬನೇ, ಆತನ ಮಕ್ಕಳು ಮಾನವ ಕುಲ, ಆದ್ದರಿಂದ ಪರಸ್ಪರರಲ್ಲಿ ಜಾತಿ-ವರ್ಣ-ವರ್ಗ ಭೇದವಿರಬಾರದೆಂಬ ಸಾಮಾಜಿಕ ಸಮಾನತೆ
ಗಣಾಚಾರ
ಅಸಮಾನತೆ, ಮೂಢನಂಬಿಕೆ, ಶೋಷಣೆ ಇತ್ಯಾದಿ ಅನಿಷ್ಠಗಳ ವಿರುದ್ಧ ಆತ್ಮಸ್ಥೆರ್ಯದ ಶಸ್ತ್ರಹಿಡಿದು ಹೊರಾಡುವ ನೀತಿ
ಭೃತ್ಯಾಚಾರ
ವ್ಯಕ್ತಿಗಿಂತ ಸಮಾಜ ಹಿರಿದು, ವ್ಯಕ್ತಿಗಿಂತ ಸಮಷ್ಟಿ ಹಿತ ಮುಖ್ಯ ಎಂದು ಸಮಷ್ಟಿಯ ಹಿತಕ್ಕಾಗಿ ವ್ಯಕ್ತಿ ತ್ಯಾಗಪೂರ್ಣ ಮನೋಭಾವದಿಂದ ಸೇವೆ ಸ ಮಾಡುವ ನೀತಿ
