ಷಟ್ ಶೀಲಗಳು
The English version of this page is not ready yet. The Kannada text is shown below.
ಲಿಂಗದೇವ ನಿಷ್ಠೆ
ಸೃಷ್ಟಿಕರ್ತ ಪರಮಾತ್ಮಲಿಂಗದೇವನ ಅಸ್ತಿತ್ವದಲ್ಲಿ ನಂಬಿಕೆ ಇರಿಸಿ, ದೇವನೆ ಪರಮೋನ್ನತ ಶಕ್ತಿ ಎಂದು ಶರಣಾಗಿ ದೇವರನ್ನು ಇಷ್ಟಲಿಂಗ ರೂಪದಲ್ಲಿ ಅರ್ಚಿಸಿ, ಪ್ರಾರ್ಥಿಸಿ, ಧ್ಯಾನಿಸಬೇಕು.
ಧರ್ಮಗುರು ನಿಷ್ಠೆ:
ಶ್ರೀಗುರು ಬಸವಣ್ಣನವರು ಪರಮಾತ್ಮನ ಪ್ರತಿನಿಧಿ ಎಂದು ನಂಬಿ, ಶರಣಾಗಿ ಅವರನ್ನು ಪೂಜಿಸಿ, ಪ್ರಾರ್ಥಿಸಿ, ಧ್ಯಾನಿಸಬೇಕು.
ಧರ್ಮಶಾಸ್ತ್ರ ನಿಷ್ಟೆ:
ಗುರು ಬಸವಣ್ಣನವರೇ ಆದಿ ಪ್ರಮಥರಾಗಿ ಅವರ ಸಮಕಾಲೀನ ಶರಣರು ಕೊಟ್ಟ ವಚನ ಸಾಹಿತ್ಯವನ್ನು ಧರ್ಮಸಂಹಿತೆ ಎಂದು ತಿಳಿದು ಅದರ ಅಧ್ಯಯನ ಪಠಣ ಮತ್ತು ಅನುಷ್ಠಾನ ಮಾಡಬೇಕು.
ಗಣಮೇಳದ ನಿಷ್ಠೆ
ನಿತ್ಯ ಅರ್ಚನೆ, ಸಂಜೆಯ 7ರ ಸಮಯದ “ನೆನಹು”, ಸಾಪ್ತಾಹಿಕ ಸಾಮೂಹಿಕ ಪ್ರಾರ್ಥನೆ "ಶರಣ ಸಂಗಮ”, ಶಿವರಾತ್ರಿಯಂದು ನಡೆಯುವ ಸ್ಥಳೀಯ "ಗಣಮೇಳ', ಕೂಡಲ ಸಂಗಮದಲ್ಲಿ ನಡೆಯುವ ಜಾಗತಿಕ ಲಿಂಗಾಯತ' ಗಣಮೇಳವಾದ "ಶರಣಮೇಳ”, ಬಸವಕಲ್ಯಾಣದ “ಕಲ್ಯಾಣಪರ್ವ", (ಅಲ್ಲಮಪ್ರಭುಗಿರಿಯ “ಲಿಂಗಾಯತ ಗಣಮೇಳ') ಮುಂತಾದ ಗಣ ಸಮಾವೇಶಗಳಲ್ಲಿ ಭಾಗಿಯಾಗುವುದು ಕರ್ತವ್ಯವೆಂದರಿಯಬೇಕು.
ಕಾಯಕ ದಾಸೋಹ ನಿಷ್ಟೆ
ಸತ್ಯ ಶುದ್ಧ ಕಾಯಕ ವ್ರತಧಾರಿಯಾಗಿ ತನ್ನ ಗಳಿಕೆಯ ಒಂದು ಪಾಲನ್ನು ಕಡ್ಡಾಯವಾಗಿ ಧರ್ಮ- ಸಮಾಜಗಳ ಏಳಿಗೆಗಾಗಿ ನೀಡಿ ಧನದಾಸೋಹ ಮಾಡಬೇಕು.
ಶರಣ ಮೇಳ ನಿಷ್ಠೆ
ಕೂಡಲ ಸಂಗಮವನ್ನು ಧರ್ಮಕ್ಷೇತ್ರವೆಂದು ತಿಳಿದು, "ಶರಣಮೇಳ" ವೆಂಬ ಜಾಗತಿಕ, ಧಾರ್ಮಿಕ ಉತ್ಸವದಲ್ಲಿ ಭಾಗಿಯಾಗಿ, ಗಣಲಿಂಗ ದರ್ಶನವನ್ನು ಪಡೆದು ಜನವರಿ 14 ರಂದು ನಡೆಯುವ "ಸಮುದಾಯ ಪ್ರಾರ್ಥನೆ" ಯಲ್ಲಿ ಒಮ್ಮೆಯಾದರೂ ಭಾಗಿಯಾಗಿ ತನ್ನ ಧಾರ್ಮಿಕ ಅನುಯಾಯಿತ್ವವನ್ನು ಸ್ಥಿರೀಕರಿಸಬೇಕು.
