ಷಟಸ್ಥಲ

ಲಿಂಗಾಯತ ಧರ್ಮದಲ್ಲಿರುವ ಆರು ಆಧ್ಯಾತ್ಮಿಕ ಹಂತಗಳು

The English version of this page is not ready yet. The Kannada text is shown below.

  1. ಭಕ್ತ

    ದೇವನೊಬ್ಬನಿದ್ದಾನೆ ಎಂಬ ದೃಢ ನಂಬಿಕೆ ತಾಳಿರುವ ಶ್ರದ್ಧಾವಂತ

  2. ಮಹೇಶ

    ದೇವರಲ್ಲಿ ಮತ್ತು ದೇವರ ಕುರುಹಾದ ಇಷ್ಟಲಿಂಗದಲ್ಲಿ ಅಚಲ ನಂಬಿಕೆ, ದೃಢ ವಿಶ್ವಾಸವನ್ನಿಟ್ಟು ಏಕದೇವೋಪಾಸಕನಾದ ನಿಷ್ಠಾವಂತ

  3. ಪ್ರಸಾದಿ

    ದೇವರಿಗೆ ಶರಣಾಗತಿಹೊಂದಿ, ಸುಖದುಃಖಗಳೆಲ್ಲವು ದೇವರ ಕ್ಪೆಪೆಯೆಂದು ಸಮಾಧಾನ ಚಿತ್ತದಿಂದಿರುವ ಸಮಾಧಾನಿ

  4. ಪ್ರಾಣಲಿಂಗಿ

    ದೇವರನ್ನು ಜೀವನದ ಉಸಿರು ಎಂದು ತಿಳಿದ ಅವಧಾನಿ

  5. ಶರಣ

    ದೇವರನ್ನು ತನ್ನ ಪತಿ ಮತ್ತು ತಾನು ದೇವನ ಸತಿಯೆಂಬ ಭಕ್ತಿ ಯುಳ್ಳ ಪರಿಣಾಮಿ

  6. ಐಕ್ಯ

    ದೇವರಲ್ಲಿ ಸದಾ ಒಂದಾದ ಭಾವ. ಲಿಂಗಾಂಗ ಸಾಮರಸ್ಯ ಅನುಭವಿಸುವ ಸುಯಿಧಾನಿ