ಷಟ್ ಕ್ರಿಯೆಗಳು

The English version of this page is not ready yet. The Kannada text is shown below.

  1. ಆಚಾರ

    ಅಂತರಂಗದ ದಿವ್ಯ ನಂಬಿಕೆ, ಭಾವನೆಗಳು ವಚನ ಶಾಸ್ತ್ರ ಶಿಷ್ಟಾಚಾರದಂತೆ ಇದ್ದು, ಬಹಿರಂಗ ಜೀವನವೂ ಶುದ್ಧವಾಗಿ, ಪವಿತ್ರವಾಗಿ ಸಂಭಾವಿತವಾಗಿ ಆಚರಿಸುವುದು.

  2. ಅರಿವು

    ದೇವರ ಮತ್ತು ಆತ್ಮದ ದಿವ್ಯ ಜ್ಞಾನಹೊಂದಿರಬೇಕು. ಇಲ್ಲದಿದ್ದರೆ, ಉದ್ದೇಶ ಒಳ್ಳೆಯದಾಗಿದ್ದರೂ ಸಾಧಕನ ಪ್ರಯತ್ನ ಸಫಲವಾಗುವುದಿಲ್ಲ.

  3. ಲಿಂಗಪ್ರೇಮ

    ದೇವರಲ್ಲಿ ಭಯದ ಬದಲಾಗಿ ಉತ್ಕಟ ಪ್ರೇಮವಿರಬೇಕು. ಭಕ್ತಿಯೆಂದರೆ ದಿವ್ಯವಾದ ದೈವೀಕರಣಗೊಂಡ (Divinised Love) ಆಗಿದೆ

  4. ಜಂಗಮ ಸೇವೆ

    ಜಂಗಮನು ಆಧ್ಯಾತ್ಮಿಕ ಮಾರ್ಗದರ್ಶಿ, ಬದ್ಧತೆಯುಳ್ಳ ಪವಿತ್ರಾತ್ಮನು. ಪ್ರತಿಯೊಬ್ಬ ಲಿಂಗಾಯತನು ಆ ನಿಷ್ಠೆಯ ಪವಿತ್ರಾತ್ಮರುಗಳಿಗೆ ತನು, ಮನ, ಧನದಿಂದ ಸೇವೆ ಸಲ್ಲಿಸಬೇಕು.

  5. ಪ್ರಸಾದ ಶುದ್ಧಿ

    ಆಹಾರವು ಪ್ರಮುಖವಾಗಿ ಅವಶ್ಯಕ. ಇದು ಸರಳವಾಗಿ, ಶುದ್ಧವಾಗಿ, ಸಾತ್ವಿಕವಾಗಿದ್ದು, ದೇವರಿಗೆ ಅರ್ಪಿಸಿಯೇ ಸ್ವೀಕರಿಸಬೇಕು.

  6. ದಾಸೋಹ

    ಪ್ರತಿಯೊಬ್ಬ ಅನುಯಾಯಿಯು ತನ್ನ ದುಡಿಮೆಯಲ್ಲಿನ ಒಂದುಭಾಗವನ್ನು ಕಾಯ್ದಿರಿಸಿ, ಅದನ್ನು ಧರ್ಮ ಪ್ರಚಾರಕ್ಕೆ, ಸಮಾಜಕ್ಕೆ, ಬಡಬಗ್ಗರಿಗೆ ಉಪಯೋಗಿಸಬೇಕು.